ಎತ್ತಿನ ಭುಜ ಮತ್ತೆ ಒಂಬತ್ತು ಗುಡ್ಡದ ಕಥೆ 


ಶುಕ್ರವಾರ ನಾವು ಬೆಂಗಳೂರಿನಿಂದ ತಲುಪಿದ್ದು ಬೈರಾಪುರಕ್ಕೆ , ರಾತ್ರಿ ಬೈರಾಪುರ ಎಸ್ಟೇಟ್ನಲ್ಲಿ ವಿಶ್ರಮಿಸಿ

ಬೆಳ್ಳಿಗೆ ಎದ್ದು ಎತ್ತಿನಭುಜ ಚಾರಣಕ್ಕೆ ಹೊರಟೆವು.

 

ದಾರಿ ಮಧ್ಯ ನಮಗೆ ಪರಿಚಯ ಆಗಿದ್ದು ಮಧನ್ , ಶರತ್ ಮತ್ತೆ ನಾಗು. 

ಮಧನ್ ಬೈರಾಪುರದ್ಲಲೇ ಸಣ್ಣ  ಝರಿಯ ಪಕ್ಕ ಒಂದು ಅಂಗಡಿ  ಇಟ್ಟುಕೊಂಡು ಚಾರಣಕ್ಕೆ ಹೋಗಿ ಬರುವ ಪ್ರವಾಸಿಗರಿಗೆ ಊಟ ಹಾಗೂ ಇತರ ತಿಂಡಿ- ತಿನಿಸುಗಳ ವ್ಯವಸ್ಥೆ ಮಾಡಿಕೊಡುತಾನೆ, ಬೆಳ್ಳಿಗೆ ಅಲ್ಲೇ ಅಂಗಡಿಯ ಪಕ್ಕ ಕುಳಿತು ಸ್ವಲ್ಪ ಹರಟೆ ಹೊಡೆಯುವಾಗ ಶರತ್ ನಮಗೆ ಒಂಬತ್ತು ಗುಡ್ಡಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ, ತಕ್ಷಣ ನಾವು ಹಾಂ ಎಂದೆವು.


ಮೊದಲು ಎತ್ತಿನ ಭುಜ ನೋಡಿ ಬರುವುದಾಗಿ ಹೇಳಿ, ರವಿವಾರ ಒಂಬತ್ತು ಗುಡ್ಡಕ್ಕೆ ಹೋಗುವ ಯೋಜನೆ ಮಾಡಿದೆವು.


ಸುಮಾರು ೫-೬ ಕಿಮೀ ಇರುವ ಎತ್ತಿನ ಭುಜ ಚಾರಣ  

ಮಾಡಲು  ನಮಗೆ ಜಾಸ್ತಿ ಸಮಯವೇನು ಆಗಲಿಲ್ಲ.


ಬೆಟ್ಟ ಹತ್ತಿ ಸುಂದರವಾದ ದೃಶ್ಯ ಸವಿದು , ಹಾಗೆ ಒಂದಷ್ಟು  ಫೋಟೋ ತೆಗೆದು , ಕೆಳ್ಳಗೆ ಇಳಿಯುವಾಗ ಮಳೆ ಶುರುವಾಯಿತು.


ಕೊನೆಯ ಹಂತದಲ್ಲಿ ಬೆಟ್ಟ ಏರುವಾಗ ಸ್ವಲ್ಪ ಬಂಡೆಗಳು ಸಿಗುತವೆ, ನಾವು ಹೇಗೋ ಬೇಗ ಕೆಳ್ಳಗೆ ಇಳಿದ್ದು ಬಿಟ್ಟೆವು 

ಸ್ವಲ್ಪ ಜನ ಅಲ್ಲೇ ಉಳ್ಳಿದುಬಿಟ್ಟರು , "ಪಾಪ ಅವರಿಗೆ 

ಕೆಳಗೆ ಇಳಿಯುವಾಗ ದೇವರು ನೆನಪಾಗಿರುತ್ತಾನೆ "


ನಾವು ಬೆಟ್ಟ ಇಳಿದು ಮಧನ್ ಅಂಗಡಿಯಲ್ಲಿ ಊಟ ಮುಗಿಸಿ ಮೂಡಿಗೆರೆಗೆ ಹೊರಟೆವು, ಸ್ವಲ್ಪ ಹೊತ್ತು ಹಾಗೆ ಪಟ್ಟಣದಲ್ಲಿ ತಿರುಗಿ ಆಮೇಲೆ  ದೇವರಮನೆ ಕಡೆ ಹೋದೆವು.


ದೇವರಮನೆ ೩೬೦ ಡಿಗ್ರಿ ವ್ಯೂಪಾಯಿಂಟ್ , ಒಂದು ೫೦೦ ಮಿ ಹತ್ತಿದ್ರೆ ಒಳ್ಳೆ ವ್ಯೂ  ಸಿಗುತ್ತೆ , ಜೇನ್ನುಕಲ್ಲು ಗುಡ್ಡ , ಅಮೆಡಿಕಲ್ಲು ಹೀಗೆ ಹತ್ತು ಹಲವು ಬೆಟ್ಟ ನೋಡಬಹುದು.


ಅಲ್ಲೇ ಹತ್ತಿರದಲ್ಲಿ ಪುರಾತನ ಕಾಲಭೈರವೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದೆವು.

ಚೋಳರ ಕಾಲದ ಈ ದೇವಸ್ಥಾನವು ತನ್ನದೇ ಅದ ಶಕ್ತಿ ಹಾಗೂ ಇತಿಹಾಸ ಹೊಂದಿದೆ.

ಸಾಕ್ಷಾತ್ ಶಿವನೇ ಇಲ್ಲಿ ಬಂದು ನೆಲೆಸಿದ್ದ ಐತಿಹ್ಯ ಇದೆ.

ಹಾಗಾಗಿ ಶಿವನ ಪಾದ ಸ್ಪರ್ಶದಿಂದ ಬರಡಾಗಿದ್ದ ಈ ಜಾಗ ದೇವರಮನೆಯಾಗಿ ಬದಲಾಯಿತು ಎಂಬ ಪುರಾಣಿಕ ಕಥೆ ಇದೆ.


೧೪೦೦ ವರ್ಷಗಳ ಹಿಂದೆ ಚೋಳರ ರಾಜ ಬಲ್ಲಾಳ ರಾಯನು ತನ್ನ ಮನೆದೇವರಾದ ಕಾಲಭೈರವೇಶ್ವರ ಸ್ವಾಮಿಯ ದೇವಸ್ಥಾನವನ್ನು ನಿರ್ಮಾಣ ಮಾಡಿರುವುದಾಗಿ ಇತಿಹಾಸ ಹೇಳುತ್ತೆ.


ಮತ್ತೆ ಸಂಜೆ ಸುಮಾರಿಗೆ ಬೈರಾಪರಕ್ಕೆ ತಲುಪಿದೆವು , ಆ ರಾತ್ರಿ ನಮ್ಮ ವಾಸ ಉಮೇಶಣ್ಣನ ಮನೆಯಲ್ಲಾಗಿತ್ತು.

ಮಲೆನಾಡ ಶೈಲಿಯ ಮನೆ ಅವರದ್ದು , ರಾತ್ರಿ ಒಳ್ಳೆ ಹಂಡೆ ಓಲೆ ಸ್ನಾನ ಮಾಡಿದೆವು.


ಉಮೇಶ್ ಅಣ್ಣ ಮಧನ್ ಅವರ ಚಿಕ್ಕಪ್ಪ , ಸದಾ ಹಸನ್ಮುಖಿ ಹಾಗು ಸರಳ ನಡತೆಯ ಉಮೇಶ ಅಣ್ಣ ಇರುವ ಸೌಲಭ್ಯದಲ್ಲೇ ನಮ್ಮನು ಬಹಳ ಚೆನ್ನಾಗಿ ನೋಡಿಕೊಂಡರು.


ಮಧನ್ ಅವರ ತಾಯಿ ನಮಗೋಸ್ಕರ ಕಳಲೆ ಸಾರು ಮತ್ತೆ   ಕೆಸು ಸೊಪ್ಪಿನ ಪಲ್ಯ ಮಾಡಿದ್ರು , ಬಾಯಿ ಚಪ್ಪರಿಸಿ ಮಲ್ನಾಡ್ ಊಟದ ರುಚಿ ಸವಿದೆವು.


ದಿನವಿಡೀ ತಿರುಗಿ ಸುಸ್ತಾಗಿದ್ದ ನಮಗೆ ಚಾಪೆ ದಿಂಬು ಕಂಡ ತಕ್ಷಣ ನಿದ್ದೆಗೆ ಜ್ಯಾರಿದ್ದೆ ಗೊತ್ತಾಗಲಿಲ್ಲ.


ಮಧ್ಯರಾತ್ರಿ ಒಳ್ಳೆ ಚಳಿ       ಬೈರಾಪುರದಲ್ಲಿ ,ಮಳೆಯಾಗಿದ್ದಕ್ಕೋ  ಅಥವಾ    ಗಾಳಿಗೋ ಗೊತ್ತಾಗಲಿಲ್ಲ     

ಉಮೇಶಣ್ಣನ ಮನೆಯಲ್ಲಿ ಇದ್ದ ಎಲ್ಲಾ ಹೊದಿಕೆ , ಕಂಬಳಿ ಅವತ್ತು  ಉಪಯೋಗಕ್ಕೆ ಬಂತು    


ಬೆಳ್ಳಿಗೆ  ಎದ್ದು ನೋಡಿದ್ರೆ ವಿಪರೀತ ಮಳೆ , ಇನ್ನು ಒಂಬತ್ತು ಗುಡ್ಡದ  ಕಥೆ ಅಷ್ಟೇ ಅನ್ನೋ ಅಷ್ಟರಲ್ಲಿ        

ಸುಮಾರು ೯ ಗಂಟೆಗೆ  ಸ್ವಲ್ಪ ಮಳೆ ಕಮ್ಮಿ ಆಯಿತು.

ಶರತ್ ಹಾಗು ನಾಗು ಕೂಡ ಸಮಯಕ್ಕೆ ಸರಿಯಾಗಿ ಬಂದರು. 


ಶರತ್ ಬೈರಾಪುರದವನೇ , ಸ್ವಲ್ಪ ದಿನ ಬೆಂಗಳೂರಿನಲ್ಲಿ 

ಇದ್ದನಂತೆ , ಯಾಕೆ ಬಿಟ್ಟು ಬಂದೆ ಅಂತ ಕೇಳಿದ್ರೆ 

" ಸಾರ್ , ಸಾಕು ಬೆಂಗಳೂರು ಸಹವಾಸ ಹಳ್ಳಿ ಮೇಲೆ ಕೂಲಿ ಮಾಡಿಕೊಂಡು ಅದ್ರು ಇರ್ಬಹುದು , ಸಿಟಿ ಲೈಫ್ ಬೇಡ್ವೇ ಬೇಡ " ಅಂತ ಅವನ ಸಿಟಿ ಮೇಲಿನ ಕೊರಗನ್ನು ತೋಡಿಕೊಂಡ.


ನಾನು ಸಹ ಒಳ್ಳೆ ನಿರ್ಧಾರ ಎದ್ದು ಸಮ್ಮತಿ ಸೂಚಿಸಿದೆ .

ವಿದ್ಯಾಭ್ಯಾಸ ಹಳ್ಳಿ ಮೇಲಿನ ಜನತೆಗೆ ಪಟ್ಟಣಕ್ಕೆ ಹಾರುವ ರೆಕ್ಕೆ ಆಗಿಹೋಗಿದೆ. 


ಇನ್ನು ನಾಗು , ಸರಿ ಸುಮಾರು ೬೫ ವರ್ಷ ಇವರಿಗೆ ,

ಇನ್ನು ನಮ್ಮಯೆಲ್ಲರ  ಹುರುಪು ನಾಚಿಸುವಂತಹ ಎನರ್ಜಿ ಇವರದ್ದು, ನಾಗು ಅವರ ಮಾತು ಕೇಳಲೇ ಚಂದ 

ಕಾಡು ಮತ್ತು ಕೃಷಿಯ ಬಗ್ಗೆ ಅಪಾರ ತಿಳುವಳಿಕೆ   ಇವರಿಗೆ.


ಹೀಗೆ ನಾವು ಬೆಟ್ಟ ಹತ್ತಲು ಶುರು ಮಾಡಿದೆವು ,

ದಾರಿಯುದ್ದಕ್ಕೂ ನಾಗು ನಮಗೆ ಹಲವು ಬಗೆಯ ಮರ , ಗಿಡ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಹೇಳುತ್ತಾ  ಹೋದರು, ಆಗ ನನಗೆ ಒಂದು ಅರ್ಥವಾದದ್ದು ಏನೆಂದ್ರೆ 

ವಿಧ್ಯೆಕಿಂತ ಅನುಭವ ಮುಖ್ಯ ಎಂದು.


ಸುಮಾರು ೧೦-೧೨ ಕಿಮೀ  ಚಾರಣ ಅದು , ಅಷ್ಟೆಯೇನು ಕಷ್ಟದ ದಾರಿಯೆಲ್ಲ ಅದು ಆದರೆ ಬಹಳ ಕುತೂಹಲಕಾರಿ ಬೆಟ್ಟ ಅದು ,ಹಲವು ಬಗೆಯ ಪ್ರಾಣಿ , ಪಕ್ಷಿ , ಹಾಗು ಸಸ್ಯ ರಾಶಿಗಳ ತಂಗುದಾಣವದು.


ಹೀಗೇ ನಮ್ಮ ಒಂಬತ್ತು ಗುಡ್ಡದ  ಚಾರಣವು ಮುಗಿಯುತ್ತಾ ಬಂತು. 

ಕೆಳೆಗೆ ಇಳ್ಳಿದು , ಊಟ ಮಾಡಿ ಹಾಗೆ ಮಧನ್ ಅಂಗಡಿಯಲ್ಲಿ ಕುಳಿತು ಮಾತನಾಡುತಿರುವಾಗ ಅಲ್ಲೇ ಬೈರಾಪುರದವರೇ ಒಬ್ಬರ ಪರಿಚಯವಾಯಿತು, ಅವರು ತಮ್ಮ ಬಳಿ ಜೇನ್ನುತುಪ್ಪ  ಮತ್ತು  ಮಲ್ನಾಡ್ ಗಿಡ್ಡ ಹಸುವಿನ ತುಪ್ಪ ಇರುವುದಾಗಿ ಹೇಳಿದರು.


ತಿಂದು ನೋಡೇ ಬಿಡೋಣವೆಂದು ನಾವು ಅವರ ಹಿಂದೆಯೇ ಅವರ ಮನೆ ಕಡೆ ನಡೆದೆವು 


ಅಲ್ಲಿ ಅವರು ನಮಗೆ ಅಕ್ಕಿರೊಟ್ಟಿಯ ಜೊತೆ ತುಪ್ಪ ಮತ್ತೆ ಜೇನ್ನು ಎರಡನ್ನು ಮಿಕ್ಸ್ ಮಾಡಿ ತಿನ್ನಲು ಕೊಟ್ಟರು 


"ವಾ" ಎಂತಾ ರುಚಿ ಅದು ,ಇನ್ನು ಬಾಯಲ್ಲಿ ನೀರು  ಬರುತ್ತೆ .


ಇನ್ನೊಂದು ವಿಷಯ ಮರ್ತೇ 

ನಾವು ಮನೆ  ಒಳ್ಳಗೆ ಕುಳಿತು ತಿನ್ನುತ ಇರ್ಬೇಕಾದರೆ , ನಾಗುನ ನಾನು ಒಳ್ಳಗೇ ಬರುವುದಾಗಿ ಹೇಳಿದೆ , ಆಗ ಅಲ್ಲಿ ಸ್ವಲ್ಪ ಗೊಂದಲ ಸೃಷ್ಟಿ ಆಯಿತು , ಆ ಕ್ಷಣಕ್ಕೆ ನನಗೆ ಅದು ಅರಿವಾಗಲಿಲ್ಲ 


ಆಮೇಲೆ ಶರತ್ ಇದ್ದು ಜ್ಯಾತಿಯ ವಿಷ್ಯ ಸಾರ್ ಅಂತ ಬಿಡಿಸಿ ಹೇಳ್ದ್ , ಇನ್ನು  ಇಂತ ಆಚರಣೆ ಇರುವುದು ತುಂಬಾ ವಿಷಾದ ಸಂಗತಿ ಎಂದೆನಿಸಿತು.


ಇನ್ನೇನು ಹೊರಡುವ ಸಮಯವಾಗಿತ್ತು , ಶರತ್ ,ನಾಗು , ಮಧನ್ , ಉಮೇಶಅಣ್ಣ ಇವೆರಲ್ಲ ನಮ್ಮ ಬಂಧು ಬಳಗ ಆಗಿ ಬಿಟ್ಟಿದ್ದರು ಈ ಎರಡು ದಿನಗಳಲ್ಲಿ .


ನಮ್ಮ ಉದೇಶವೇನೆದ್ರೆ, ಹೀಗೆ ಹೋದ ಕಡೆ ಅಲ್ಲಿನ ಸ್ಥಳೀಯ ಜನರ ಉಡನಾಟ ಹಾಗು ಅವರ ಆತಿಥ್ಯದಲ್ಲಿ 

ಇರುವುದರಿಂದ ಅವರಿಗೂ ನಾವು ಕೊಡುವ ಸ್ವಲ್ಪ ಹಣದಿಂದ ಉಪಯೋಗವಾಗುತದ್ದೆ ಹಾಗೆಯೆ ನಮಗೂ ಸಹ ಅಲ್ಲಿನ ಆಚರಣೆ, ಕೃಷಿ , ಹಬ್ಬ ಇತ್ಯಾದಿಗಳ  ಬಗ್ಗೆ ಒಳ್ಳೆಯ ಅರಿವು ಮೂಡುತದ್ದೇ,


ಯಾಕೆಂದ್ರೆ ಸ್ಥಳೀಯರಿಗಿಂತ ಆ ಜಾಗದ ಬಗ್ಗೆ ಬೇರೆ ಯಾರಿಗೆ ಗೊತ್ತಿರಲು  ಸಾಧ್ಯ  ! 


ಇಂತಿ ನಿಮ್ಮ , 

ವಿಘ್ನೇಶ್ ಭಟ್ಟ


ನೆನಪುಗಳು

0
Would love your thoughts, please comment.x
()
x